ಕಾರ್ಮಿಕರ ಸುರಕ್ಷತೆಯಲ್ಲಿ ನ್ಯೂನತೆ ಕಂಡು ಬಂದರೆ ಅಂತ ಸಂಸ್ಥೆಗಳ ಮಾಲೀಕರ ಮೇಲೆ ಕಾನೂನು ಕ್ರಮ : ಎ ಸೋಮಶೇಖರ್

ಬೆಂಗಳೂರು : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ನಗರ ಬೆಂಗಳೂರು, ಕಾರ್ಮಿಕ ಇಲಾಖೆ,ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಮತ್ತು ಮೆ:ಪ್ರಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ ಲಿಮಿಟೆಡ್ ಹಾಗೂ ಜೆಎಂಸಿ ಪ್ರಾಜೆಕ್ಟ್‌ (ಇಂಡಿಯಾ) ಇವರುಗಳ ಸಂಯುಕ್ತ ಆಶ್ರಯದಲ್ಲಿ ಸರಕು ಸಾಗಣೆ ಅಥವಾ ಕನ್ಸ್ ಟ್ರಕ್ಷನ್ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಪ್ರಯಾಣಿಸಬಾರದೆಂದು ಅರಿವು ಮೂಡಿಸುವ ಬಗ್ಗೆ ‌ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಬೆಂಗಳೂರು ನಗರದ ಉತ್ತರಲ್ಲಿ ವಿಲೇಜ್ ನ ಪ್ರೆಸ್ಟೀಜ್‌ ಲೇಕ್ ರಿಡ್ಜ್ ನಲ್ಲಿ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸೋಮಶೇಖರ್ ಎ ರವರು ಮನುಷ್ಯನ ಜೀವನ ತುಂಬಾ ಅಮೂಲ್ಯವಾದದ್ದು ಅದ್ದರಿಂದ ರಾಜ್ಯದಲ್ಲಿ ವಿವಿಧ ಉದ್ಯಮೆಗಳ ಮಾಲೀಕರು ತಮ್ಮಲ್ಲಿ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರನ್ನು ಸರಕು ಸಾಗಣೆ ಹಾಗೂ ಕನ್ ಸ್ಟ್ರಕ್ಷನ್ ವಾಹನಗಳಲ್ಲಿ ಜನರನ್ನು ಸಾಗಿಸುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಯೋಜನೆಗಳಿದ್ದು ಎಲ್ಲಾರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಎಲ್ಲಾ ಕಾರ್ಮಿಕರು ಸಹ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿ ಗುರುತಿನಿ ಚೀಟಿ ಪಡೆದುಕೊಳ್ಳಬೇಕೆಂದು ಮನವಿ‌ ಮಾಡಿದರು ಮತ್ತು ಕೂಲಿ ಕಾರ್ಮಿಕರ ಸುರಕ್ಷತೆ ಬಗ್ಗೆ ನ್ಯೂನತೆ ಕಂಡು ಬಂದರೆ ಅಂತ ಉದ್ಯಮೆಗಳ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು

ಈ ಕಾರ್ಯಕ್ರಮದಲ್ಲಿ ಪ್ರೆಸ್ಟೀಜ್ ಏಸ್ಟೇಟ್ ಪ್ರಾಜೆಕ್ಟ್ ಲಿಮಿಟೆಡ್ ಪ್ರಾಜೆಕ್ಟ್ ಇನ್ ಚಾರ್ಜ್ ಪ್ರಭು ಪ್ರಸಾದ್,ಕಾರ್ಮಿಕ ಅಧಿಕಾರಿ,ಮುಕುಂದ,ಹಿರಿಯ ಕಾರ್ಮಿಕ ನಿರೀಕ್ಷಕ ಪ್ರೇಮಕುಮಾರ್,ಪ್ರಶಾಂತ್ ಕುಮಾರ್ ಮುಂತಾದವರು ಭಾಗವಹಿಸಿದ್ದರು

Share Post

Leave a Reply

Your email address will not be published. Required fields are marked *

error: Content is protected !!