ಈ ತಿಂಗಳಿನಲ್ಲಿ ನಡೆಯುತ್ತೆ ಸುಮಲತಾ ಬದುಕಿನ 4 ಮಹಾ ಘಟನೆಗಳು..!

ನಟಿ ಸುಮಲತಾಗೆ ಮಂಡ್ಯ ಚುನಾವಣಾ ಬಳಿಕ ಕೊಂಚ ಬಿಡುವು ಸಿಕ್ಕಿದೆ. ನಿರಂತರ ‌ಪ್ರಚಾರ ಕೆಲಸದ ನಡುವೆ ಈಗ ಫಲಿತಾಂಶಕ್ಕಾಗಿ ಅವರು ಕಾಯುತ್ತಿದ್ದಾರೆ. ಈ ತಿಂಗಳು ಸುಮಲತಾ‌ ಬದುಕಿನಲ್ಲಿ ಬಹಳ‌ ಮುಖ್ಯವಾಗಿದೆ. ಮೇ 23 ರಿಂದ 31 ವರೆಗೆ ಅಂದರೆ ಕೇವಲ 8 ದಿನಗಳಲ್ಲಿ ಅವರ ಬದುಕಿನ ನಾಲ್ಕು ಮಹಾ ಘಟನೆಗಳು ನಡೆಯುತ್ತದೆ. ಸಿನಿಮಾ, ರಾಜಕೀಯ ಹಾಗೂ ವೈಯಕ್ತಿಕ ಕಾರಣಗಳಿಂದ ಈ ತಿಂಗಳು ಸುಮಲತಾ ಪಾಲಿಗೆ ಬಹಳ ವಿಶೇಷವಾಗಿದೆ 

ಈ ವರ್ಷದ ಮೇ ತಿಂಗಳು ಸುಮಲತಾ ಅವರಿಗೆ ಏಕೆ ಅಷ್ಟೊಂದು ಮುಖ್ಯ ಎನ್ನುವ ಕುತೂಹಲ ನಿಮಗೂ ಇದ್ಯಾ ಹಾಗಾದರೆ ಅದರ ಸಂಪೂರ್ಣ ವಿವರ ಇಲ್ಲಿದೆ…

ಮೇ 23ಕ್ಕೆ ಚುನಾವಣಾ ಫಲಿತಾಂಶ

2019 ನೇ ಸಾಲಿನ ಲೋಕಸಭಾ ಚುನಾವಣಾ ಫಲಿತಾಂಶ ಮಾರ್ಚ್ 23 ರಂದು ಬರುತ್ತದೆ.‌ ಈ ಬಾರಿ ಎಲ್ಲರ ಕಣ್ಣು ಮಂಡ್ಯದ ಮೇಲೆ ಇದೆ. ನಿಖಿಲ್ ಕುಮಾರ್ ವಿರುದ್ಧ ಸುಮಲತಾ ಗೆದ್ದರೆ, ಅವರ ರಾಜಕೀಯ ಜೀವನದ ಅಧ್ಯಾಯ ಶುರು ಆಗಲಿದೆ. ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದ‌ ಸುಮಲತಾಗೆ ಈ ಫಲಿತಾಂಶ ಬಹಳ‌ ಮುಖ್ಯವಾಗಿದೆ.

ಮೇ 24ಕ್ಕೆ ‘ಡಾಟರ್ ಆಫ್ ಪಾರ್ವತಮ್ಮ’

ಸುಮಲತಾ ನಟನೆಯ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾ ಚುನಾವಣಾ ಫಲಿತಾಂಶದ‌ ನಂತರ ದಿನ ಅಂದರೆ ಮೇ 24 ರಂದು ಬಿಡುಗಡೆಯಾಗುತ್ತಿದೆ. ಹರಿಪ್ರಿಯಾ ಚಿತ್ರದ ನಾಯಕಿಯಾಗಿದ್ದರೂ, ಸಿನಿಮಾದಲ್ಲಿ ಸುಮಲತಾ ಪಾತ್ರಕ್ಕೆ ಅಷ್ಟೇ ಪ್ರಾಮುಖ್ಯತೆ ಇದೆ. ಇಲ್ಲಿ ಪಾರ್ವತಮ್ಮನಾಗಿ ಸುಮಲತಾ ಕಾಣಿಸಿಕೊಂಡಿದ್ದಾರೆ.

ಮೇ 29ಕ್ಕೆ ಅಂಬಿ ಇಲ್ಲದ ಹುಟ್ಟುಹಬ್ಬ

ಪ್ರತಿ ವರ್ಷ ಕೂಡ ಅಭಿಮಾಗಳು ಹಾಗೂ ಕುಟುಂಬದ ಜೊತೆಗೆ ಹಬ್ಬ ಆಚರಿಸುತ್ತಿದ್ದ ರೆಬಲ್ ಸ್ಟಾರ್ ಈ ವರ್ಷ ಇಲ್ಲ. ಅಂಬಿ ಇಲ್ಲದ ಮೊದಲ ಹುಟ್ಟುಹಬ್ಬ ಈಗ ಸುಮಲತಾ ಮುಂದೆ ಬಂದಿದೆ. ‌ಪ್ರತಿ ವರ್ಷ ಸಂತೋಷ ನೀಡುತ್ತಿದ್ದ ಈ ದಿ‌ನ, ಈಗ ಅಂಬಿ ಇಲ್ಲದ ನೋವು ನೀಡುತ್ತಿದೆ.

ಮೇ 31ಕ್ಕೆ ಮಗನ ಮೊದಲ ಚಿತ್ರ

ಸುಮಲತಾ ಮಗ ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾ ‘ಅಮರ್’ ಸಹ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಮೇ 31 ರಂದು ಸಿನಿಮಾ ಅಭಿಮಾನಿಗಳ‌ ಮುಂದೆ ಬರುತ್ತಿದೆ. ಸುಮಲತಾ ರಾಜಕೀಯ ಭವಿಷ್ಯ ಒಂದು ಕಡೆಯಾದರೆ, ಮಗ ಕೂಡ ಇದೇ ತಿಂಗಳು ಚಿತ್ರರಂಗಕ್ಕೆ ಮೊದಲ‌ ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ ‘ಅಮರ್’ ಹಾಡುಗಳು ಹಿಟ್ ಆಗಿದೆ, ಸಿನಿಮಾದ ಮೇಲೆ ಕುತೂಹಲ ಹುಟ್ಟಿದೆ. ಜನಪ್ರಿಯ ಚಲನಚಿತ್ರಗಳು & ಸಿನಿತಾರೆಯರು

Share Post

Leave a Reply

Your email address will not be published. Required fields are marked *

error: Content is protected !!