ಐಸಿಸ್ ಮುಖ್ಯಸ್ಥ, ರಕ್ತಪಿಪಾಸು ಬಾಗ್ದಾದಿ ಮತ್ತೆ ಪ್ರತ್ಯಕ್ಷ ..!

ಬರೋಬ್ಬರಿ 5 ವರ್ಷಗಳ ಕಾಲ ಭೂಗತನಾಗಿದ್ದ ಇಸ್ಲಾಮಿಕ್​ ಸ್ಟೇಟ್​ ಗ್ರೂಪ್​ನ ಮುಖ್ಯಸ್ಥ ಅಬೂ ಬಕರ್​ ಅಲ್-ಬಾಗ್ದಾದಿ ಮತ್ತೆ ಕಾಣಿಸಿಕೊಂಡಿದ್ದಾನೆ.

ಐಎಸ್​ಐಎಸ್​ನ ಪ್ರಚಾರದ ವಿಡಿಯೋದಲ್ಲಿ ಅರೇಬಿಕ್​ ಭಾಷೆಯಲ್ಲಿ ಮಾತನಾಡಿರುವ ಈತ ಶ್ರೀಲಂಕಾದ ದಾಳಿಯ ಕುರಿತೂ ಉಲ್ಲೇಖಿಸಿದ್ದಾನೆ. ಶ್ರೀಲಂಕಾ ದಾಳಿಯನ್ನ ನಾವೇ ಮಾಡಿದ್ದು ಅಂತ ಹೇಳಿಕೊಂಡಿದ್ದಾನೆ. ಸಿರಿಯಾ ಸೋಲಿನ ಪ್ರತಿಕಾರವೇ ಶ್ರೀಲಂಕಾ ದಾಳಿ ಎಂದು ಹೇಳಿದ್ದಾನೆ.

ಬಘೌಝ್​​ನ ಯುದ್ಧ ಇಲ್ಲಿಗೆ ಮುಕ್ತಾಯವಾಗಿದೆ. ಶ್ರೀಲಂಕಾದಲ್ಲಿ ನಡೆಸಿದ ಸರಣಿ ದಾಳಿ ಈ ಬಘೌಝ್​ ದಾಳಿಗೆ ಪ್ರತಿಕಾರವಾಗಿದೆ ಅಂತ ಹೇಳಿದ್ದಾನೆ.  ವಿಡಿಯೋ ಹೊರಬರುತ್ತಿದ್ದಂತೆ ಎಸ್​​ಐಟಿಇ ತಂಡ ಹಾಗೂ ಇರಾಕ್​​​ನ ತಜ್ಞರ ತಂಡ ಈತ ಬಾಗ್ದಾದಿಯೇ ಅನ್ನೋದನ್ನೂ ಖಚಿತ ಪಡಿಸಿದೆ.  ಬಾಗ್ದಾದಿ ಮತ್ತೆ ಕಾಣಿಸಿಕೊಂಡಿರೋದು ಜಗತ್ತಿನೆಲ್ಲೆಡೆ ಆತಂಕ ಸೃಷ್ಟಿಸಿದೆ.

Share Post

Leave a Reply

Your email address will not be published. Required fields are marked *

error: Content is protected !!