ಚೌಕೀದಾರ್ ಹೇಳಿಕೆಗೆ ವಿಷಾದ- ಕ್ಷಮೆ ಇಲ್ಲ ಎಂದ ರಾಗಾ

ರಫೇಲ್‌ ತೀರ್ಪು ಕುರಿತ ಹೇಳಿಕೆಗಾಗಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ ನೊಟೀಸ್ ಗೆ ಉತ್ತರ ಸಲ್ಲಿಸಿದ್ದಾರೆ. ಚೌಕೀದಾರ್‌ ಚೋರ್‌ ಹೈ ಎಂಬ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದ್ರೆ ಕ್ಷಮೆಯಾಚಿಸಿಲ್ಲ.

‘ಚೌಕೀದಾರ್‌ ಚೋರ್‌ ಹೈ ಎಂದು ಸುಪ್ರೀಂ ಕೋರ್ಟ್‌ ಕೂಡ ತನ್ನ ತೀರ್ಪಿನಲ್ಲಿ ಹೇಳಿದೆ’ ಎಂಬ ತನ್ನ ಪ್ರಮಾದಯುಕ್ತ ಹೇಳಿಕೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಘನತೆ-ಗೌರವವನ್ನು ಕುಂದಿಸುವ ಉದ್ದೇಶವಿರಲಿಲ್ಲ. ಅದನ್ನು ರಾಜಕೀಯ ಕದನಕ್ಕೆ ಎಳೆದು ತರುವ ಕಿಂಚಿತ್‌ ದುರುದ್ದೇಶ‌ವಾಗಲೀ, ಹಂಬಲವಾಗಲೀ ಅಥವಾ ಆ ರೀತಿಯ ಆಲೋಚನೆಯಾಗಲೀ ತನಗಿರಲಿಲ್ಲ ಎಂದು ರಾಹುಲ್‌ ಗಾಂಧಿ ತನ್ನ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!