ಇಂದು ನಾಲ್ಕನೇ ಹಂತದ ಮತದಾನ – ಹಕ್ಕು ಚಲಾಯಿಸಿದ ಸೆಲೆಬ್ರಿಟಿಗಳು

ಲೋಕಸಭಾ ಚುನಾವಣೆಗೆ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. 9 ರಾಜ್ಯಗಳ ಒಟ್ಟು 72 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದ 17 ಕ್ಷೇತ್ರಗಳು, ರಾಜಸ್ಥಾನ ಹಾಗೂ ಉತ್ರರಪ್ರದೇಶದಲ್ಲಿ ತಲಾ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದಲ್ಲಿ 8 ಕ್ಷೇತ್ರಗಳು, ಮಧ್ಯಪ್ರದೇಶ ಹಾಗೂ ಒಡಿಶಾದಲ್ಲಿ 6, ಬಿಹಾರದ 5, ಜಾರ್ಖಂಡ್​​ನಲ್ಲಿ 3 ಹಾಗೂ ಜಮ್ಮು ಕಾಶ್ಮೀರದ ಅನಂತ್​​ನಾಗ್​​​ ಕ್ಷೇತ್ರದ ಒಂದು ಭಾಗದಲ್ಲಿ ಜನ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಕಾಂಗ್ರೆಸ್​​ ಸಂಸದೆ, ಮುಂಬೈ ಉತ್ತರ ಕ್ಷೇತ್ರದ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಬಾಂದ್ರಾದಲ್ಲಿ ಮತ ಹಾಕಿದ್ರೆ, ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್​​ ಜುಹೂ ಮತಗಟ್ಟೆಯಲ್ಲಿ ಮತದಾನ ಮಾಡಿದ್ರು. ಎನ್​ಸಿಪಿ ಮುಖ್ಯಸ್ಥ ಶರತ್​ ಪವಾರ್​​, ಟಾರ್ಡಿಯೋದಲ್ಲಿ ಮತ ಚಲಾಯಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!