ಡೆಲ್ಲಿ ವಿರುದ್ಧ RCBಗೆ ಸೋಲು – ಪ್ಲೇ ಆಫ್ ಕನಸು ಭಗ್ನ..!

ಆರ್​ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ  16 ರನ್​ಗಳಿಂದ ಸೋಲು ಕಂಡಿದೆ. ಇದರೊಂದಿಗೆ ಪ್ಲೇ ಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಗೆಲ್ಲಲು 188 ರನ್​ಗಳ ಗುರಿ ಬೆನ್ನಟ್ಟಿದ್ದ ವಿರಾಟ್ ಕೊಹ್ಲಿ ಪಡೆಗೆ, 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸಲಷ್ಟೇ ಸಾಧ್ಯವಾಯ್ತು. ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್ ಬಿಟ್ರೆ, ಬೇರ್ಯಾವ ಬ್ಯಾಟ್ಸ್​ಮನ್​ಗಳು ಆಡಲೇ ಇಲ್ಲ. ಕ್ಯಾಪ್ಟನ್ ಕೊಹ್ಲಿ, ಎಬಿ ಡಿವಿಲಿಯರ್ಸ್,ಬೇಗನೆ ಪೆವಿಲಿಯನ್ ಸೇರಿಕೊಂಡ್ರು.ಕೊನೆಯಲ್ಲಿ ಮಾರ್ಕಸ್​ ಸ್ಟೋಯಿನಿಸ್​ 32 ರನ್​ಗಳಿಸಿದ್ರೂ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

Share Post

Leave a Reply

Your email address will not be published. Required fields are marked *

error: Content is protected !!