ದೇವೇಗೌಡ ಗೆದ್ದರೆ ಪರಮೇಶ್ವರ್ ಆಗ್ತಾರಾ ಸಿಎಂ..? ಮುದ್ದಹನುಮೇಗೌಡ, ರಾಜಣ್ಣ ತಲಾ ಮೂರುವರೆ ಕೋಟಿಗೆ ಸೇಲ್..!

ಮಂಡ್ಯ ಬಳಿಕ ತುಮಕೂರು ಕ್ಷೇತ್ರ ಕೂಡ ಈ ಬಾರಿ ಸುದ್ದಿ ಮಾಡಿತ್ತು. ಮಾಜಿ ಪ್ರಧಾನಿ ದೇವೇಗೌಡರ ಸ್ಫರ್ಧೆಯಿಂದ ತುಮಕೂರು ರಾಜಕೀಯ ಗರಿಗೆದರಿತ್ತು. ಈ ಕ್ಷೇತ್ರದಿಂದ ಹಾಲಿ ಸಂಸದ ಮುದ್ದಹನುಮೇಗೌಡ ಹಾಗೂ ಕಾಂಗ್ರೆಸ್ ಮುಖಂಡ ರಾಜಣ್ಣ ನಾಮಪತ್ರ ಸಲ್ಲಿಸಿ ದೇವೇಗೌಡರ ವಿರುದ್ಧ ತೊಡೆ ತಟ್ಟಿದ್ರು. ಇದು ತುಮಕೂರು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಬಳಿಕ ಕಾಂಗ್ರೆಸ್ ಹಿರಿಯ ಮುಖಂಡರು ಮುದ್ದಹನುಮೇಗೌಡ, ಹಾಗೂ ರಾಜಣ್ಣ ಮನವೊಲಿಸುವಲ್ಲಿ ಯಶಸ್ವಿಯಾಗಿದ್ರು. ಇದು ಹಳೆ ಸುದ್ದಿ.

ಇವರಿಬ್ಬರು ನಾಮಪತ್ರ ವಾಪಾಸ್ ಪಡೆಯಲು ತಲಾ ಮೂರುವರೆ ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತ ಆಡಿಯೋವೊಂದು ಈಗ ವೈರಲ್ ಆಗಿದೆ. ತುಮಕೂರಿನ ಕಾಂಗ್ರೆಸ್ ಕಾರ್ಯಕರ್ತ, ಉಪಮುಖ್ಯಮಂತ್ರಿ ಪರಮೇಶ್ವರ್ ಆಪ್ತ ದರ್ಶನ್ ತನ್ನ ಸ್ನೇಹಿತನೊಂದಿಗೆ ಮಾತನಾಡಿರೋ ಅಡಿಯೋ ಇದಾಗಿದೆ. ಅಲ್ಲದೆ ಮುದ್ದಹನುಮೇಗೌಡರ ಟ್ರಾನ್ಸ್ ಫರ್ ಡೀಲ್ ಕೂಡ ಅಡಿಯೋದಲ್ಲಿ ಬಯಲಾಗಿದೆ. ಮುದ್ದಹನುಮೇಗೌಡರು ಸುಮಾರು 172 ಆಫೀಸರ್ ಗಳ ಟ್ರಾನ್ಸ್ ಫರ್ ಮಾಡಿಸಿದ್ದಾರೆ ಎಂಬ ಮಾಹಿತಿಯೂ ಬಹಿರಂಗವಾಗಿದೆ.

ಅಷ್ಟೇ ಅಲ್ಲ ತುಮಕೂರಿನಲ್ಲಿ ದೇವೇಗೌಡರನ್ನ ಗೆಲ್ಲಿಸಿದ್ರೆ ಪರಮೇಶ್ವರ್ ಗೆ ಒಂದು ದೊಡ್ಡ ಗಿಫ್ಟ್ ಸಿಗಲಿದ್ಯಂತೆ. ಆ ಗಿಫ್ಟ್ ಏನು ಗೊತ್ತಾ..? ಸಮ್ಮಿಶ್ರ ಸರ್ಕಾರದ ಸಿಎಂ ಆಗಿರೋ ಕುಮಾರಸ್ವಾಮಿಗೆ ರೆಸ್ಟ್ ನೀಡಿ, ಪರಮೇಶ್ವರ್ ಅವರನ್ನ ಸಿಎಂ ಮಾಡೋದು. ಈ ಮೂಲಕ ರಾಜ್ಯದಲ್ಲಿ ಮೊದಲ ದಲಿತ ಸಿಎಂ ಮಾಡಿದ ಹೆಗ್ಗಳಿಕೆಯನ್ನ ದೇವೇಗೌಡರು ಪಡೆಯಲು ನಿರ್ಧರಿಸಿದ್ದಾರೆ ಎಂಬುದು ಕಾರ್ಯಕರ್ತ ಮಾತನಾಡಿರೋ ಆಡಿಯೋದಲ್ಲಿ ಬಯಲಾಗಿದೆ.  

Share Post

Leave a Reply

Your email address will not be published. Required fields are marked *

error: Content is protected !!