ಆನಂದ್ ಸಿಂಗ್ ನನಗೆ ಸಹೋದರನಂತೆ – ಶಾಸಕ ಗಣೇಶ್

 ನಾನು ಮತ್ತು ಶಾಸಕ ಆನಂದ್ ಸಿಂಗ್ ಅಣ್ಣ ತಮ್ಮರಿದ್ದಂತೆ ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹೇಳಿದ್ದಾರೆ. ರೆಸಾರ್ಟ್​ನಲ್ಲಿ ನಮ್ಮಿಬ್ಬರ ನಡುವೆ ನಡೆದ ಗಲಾಟೆ ಆಕಸ್ಮಿಕ. ಆನಂದ್ ಸಿಂಗ್ ಬಗ್ಗೆ ಈಗಲೂ ಅಭಿಮಾನವಿದೆ‌ ಎಂದು ತಿಳಿಸಿದ್ದಾರೆ. ಸದ್ಯ ನಾನು ರೆಸಾರ್ಟ್​ನಲ್ಲಿ ನಡೆದ ಗಲಾಟೆ ಕುರಿತು ಏನೂ ಹೇಳುವುದಿಲ್ಲ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಸಮುದಾಯದ ಹಿರಿಯರು, ಹೀಗಾಗಿ ನಮ್ಮ ಮನೆಗೆ ಭೇಟಿ ನೀಡಿದ್ದರು. ಜಾರಕಿಹೊಳಿ ಬಿಜೆಪಿಗೆ ಯಾವುದೇ ಕಾರಣಕ್ಕೂ ಹೋಗಲ್ಲ ಎಂದು ಹೇಳಿದ್ದಾರೆ. ನಾನು ಯಾವಾಗಲೂ ಕಾಂಗ್ರೆಸ್​ನಲ್ಲಿರುತ್ತೇನೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿ ಎಂದು ಹೇಳಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!