ಶ್ರೀಲಂಕಾದಲ್ಲಿ ಮುಂದುವರಿದ ಬಾಂಬ್ ಸ್ಫೋಟ –ಬೆಚ್ಚಿ ಬಿದ್ದ ದ್ವೀಪ ರಾಷ್ಟ್ರ

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಬಾಂಬ್​ ಸ್ಫೋಟ ಮುಂದುವರಿದಿದೆ. ಕೊಲಂಬೋದಿಂದ 40 ಕಿಮೀ ದೂರದ ಪುಗೋಡಾ ಎಂಬ ಪಟ್ಟಣದಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ. ನ್ಯಾಯಾಲಯದ ಹಿಂಭಾಗದಲ್ಲಿ ಖಾಲಿ ಜಾಗದಲ್ಲಿ ಈ ಸ್ಫೋಟ ಸಂಭವಿಸಿದೆ. ಹಾಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಕುರಿತು ಸ್ಥಳೀಯರು ಮತ್ತು ಪೊಲೀಸರು ಮಾಹಿತಿ ನೀಡಿದ್ದಾರೆ. ಭದ್ರತಾ ಪಡೆಗಳು ತಕ್ಷಣ ಕಾರ್ಯಾಚರಣೆಗೆ ಇಳಿದಿವೆ. ಕಳೆದ ಭಾನುವಾರ ಈಸ್ಟರ್​​ ಹಬ್ಬದಂದು ಲಂಕಾದಲ್ಲಿ ಸರಣಿ ಬಾಂಬ್​ ಸ್ಫೋಟಗಳು ನಡೆದಿದ್ದವು. ಅದರಲ್ಲಿ 369 ಮಂದಿ ಅಸುನೀಗಿದ್ದರು. ನಿರಂತರ ಬಾಂಬ್ ಸ್ಫೋಟದಿಂದ ಲಂಕಾ ಜನತೆ ತತ್ತರಿಸಿ ಹೋಗಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!