ಟಿಕ್ ಟಾಕ್ ಪ್ರಿಯರಿಗೆ ಗುಡ್ ನ್ಯೂಸ್..ಮದ್ರಾಸ್ ಹೈಕೋರ್ಟ್ ನಿಂದ ನಿಷೇಧ ತೆರವು

ಟಿಕ್​ಟಾಕ್ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಚೀನಾದ ಟಿಕ್​ಟಾಕ್ ವಿಡಿಯೋ ಆ್ಯಪ್​​ಗೆ ನಿಷೇಧ ತೆರವುಗೊಳಿಸಿ ಮದ್ರಾಸ್​ ಹೈಕೋರ್ಟ್​ ತೀರ್ಪು ನೀಡಿದೆ. ಟಿಕ್​ಟಾಕ್ ಆ್ಯಪ್ ಅನ್ನು ಡೌನ್​ಲೋಡ್​​ ಮಾಡಿಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಅದರ ಮೇಲಿನ ನಿಷೇಧ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ. 
ದೇಶಾದ್ಯಂತ ಟಿಕ್​ಟಾಕ್ ಆ್ಯಪ್​​ ಬಳಕೆ ನಿಷೇಧಿಸಿ ಏಪ್ರಿಲ್​ 22ರಂದು ಸುಪ್ರೀಂಕೋರ್ಟ್​ ಮಧ್ಯಂತರ ಆದೇಶ ನೀಡಿತ್ತು. ಜೊತೆಗೆ ಟಿಕ್​ಟಾಕ್ ಆ್ಯಪ್ ನಿಷೇಧ ಸಂಬಂಧ ಮದ್ರಾಸ್​ ಹೈಕೋರ್ಟ್ ತಕ್ಷಣ ನಿರ್ಧಾರ ತೆಗೆದುಕೊಳ್ಳದಿದ್ದರೆ ತಾನು ನಿಷೇಧವನ್ನ ತೆರವುಗೊಳಿಸುವುದಾಗಿ ಎಚ್ಚರಿಸಿತ್ತು.
ಮದ್ರಾಸ್​ ಹೈಕೋರ್ಟ್​ ತೀರ್ಪಿನಂತೆ, ಟಿಕ್​ಟಾಕ್ ಆ್ಯಪ್ ನಿಷೇಧದಿಂದ ಪ್ಲೇ ಸ್ಟೋರ್​​ಗಳಲ್ಲಿ ಆ್ಯಪ್​ ಡೌನ್​​ಲೋಡ್​​ಗೆ ಕೇಂದ್ರ ಸರ್ಕಾರ ನಿಷೇಧ ಹೇರಿ ಆದೇಶ ಹೊರಡಿಸಿತ್ತು.

Share Post

Leave a Reply

Your email address will not be published. Required fields are marked *

error: Content is protected !!