ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರೋ ಸಿಎಂ ಹೆಚ್ ಡಿ ಕೆ

ಸಿಎಂ ಹೆಚ್​ . ಡಿ. ಕುಮಾರಸ್ವಾಮಿ ರಿಲ್ಯಾಕ್ಸ್ ಮೂಡ್​ಗೆ ಜಾರಿದ್ದಾರೆ. ಉಡುಪಿಯ ಕಾಪುವಿನ‌ ಮೂಳೂರಿನಲ್ಲಿರುವ ಸಾಯಿರಾಧಾ ಹೆರಿಟೇಜ್ ರೆಸಾರ್ಟ್​​​ನಲ್ಲಿ ಸಿಎಂ ವಾಸ್ತವ್ಯ ಹೂಡಿದ್ದಾರೆ. ನಾಳೆ ಸಂಜೆವರೆಗೆ ಸಿಎಂ ಅಲ್ಲೇ ತಂಗುವ ಸಾಧ್ಯತೆ ಇದೆ.

ಸಿಎಂ‌ ಜೊತೆಗೆ ಸಚಿವ ಪುಟ್ಟರಾಜು ಹಾಗೂ ಶಾಸಕ ಎಸ್. ಎಲ್ ಬೋಜೇಗೌಡ ಇದ್ದಾರೆ. ಇಂದು ಹಾಗೂ ನಾಳೆ ಸಿಎಂ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ. ಕಳೆದ ರಾತ್ರಿ 1 ಗಂಟೆಯವರೆಗೆ ಕಾರ್ಯಕರ್ತರ ಜೊತೆ ಸಿಎಂ ಸಮಾಲೋಚನೆ ನಡೆಸಿದ್ದಾರೆ.  ಸಿಎಂ ವಾಸ್ತವ್ಯದ ಹಿನ್ನೆಲೆ ಸಾಯಿರಾಧಾ ರೆಸಾರ್ಟ್​​ಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!