ಶ್ರೀಲಂಕಾದಲ್ಲಿ ಸ್ಫೋಟ ಹಿನ್ನೆಲೆ- ಭಾರತೀಯರಿಗಾಗಿ ಸಹಾಯವಾಣಿ

ಶ್ರೀಲಂಕಾದಲ್ಲಿ ಇಂದು ಬೆಳಗ್ಗೆ ಎಂಟು ಕಡೆ ಸರಣಿ ಸ್ಫೋಟ ನಡೆದಿದೆ. ಸ್ಫೋಟದ ಹಿಂದೆ ಐಸಿಸ್ ಉಗ್ರರ ಕೈವಾಡವಿದೆ ಎನ್ನಲಾಗಿದೆ. ಸ್ಫೋಟ ಕುರಿತಂತೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್​​ ಜೊತೆ ಸಂಪರ್ಕದಲ್ಲಿದ್ದೇವೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಅಂತಾ ಹೇಳಿದ್ದಾರೆ.  ನೆರವಿನ ಅಗತ್ಯ ಇರುವ ಎಲ್ಲಾ ಭಾರತೀಯರು +94777903082 +94112422788 +94112422789 ಈ ನಂಬರ್​​ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಭಾರತೀಯರು ಸಹಾಯಕ್ಕಾಗಿ ಈ ನಂಬರ್​ಗಳನ್ನ ಸಂಪರ್ಕಿಸಬಹುದು ಅಂತಾ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!