ಶ್ರೀಲಂಕಾದಲ್ಲಿ ಸರಣಿ ಸ್ಫೋಟ – 50ಕ್ಕೂ ಹೆಚ್ಚು ಮಂದಿ ದುರ್ಮರಣ

ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟದಲ್ಲಿ 50ಕ್ಕೂ ಹೆಚ್ಚು ಜನರು ದಾರುಣ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಲಂಬೊದ ಕೊಚಿಕಡೆ ಪ್ರದೇಶದಲ್ಲಿರೋ ಸೇಂಟ್ ಆಂಟೊನಿ ಚರ್ಚ್ ಹಾಗೂ ಕಟುವಾಪಿಟಿಯಾ ಮತ್ತು ಕಟಾನಾದಲ್ಲಿನ ಎರಡು ಚರ್ಚ್​​ಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ.  ಕೋಲಂಬೋದ ಶಾಂಗ್ರಿ-ಲಾ ಹಾಗೂ ಕಿಂಗ್ಸ್​​ಬರಿ ​ಫೈವ್​ಸ್ಟಾರ್​ ಹೋಟೆಲ್​​ಗಳಲ್ಲಿ ಕೂಡ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಮೂರು ಚರ್ಚ್ ಹಾಗೂ ಮೂರು ಫೈವ್ ಸ್ಟಾರ್ ಹೋಟೆಲ್​ಗಳಲ್ಲಿ ಈ ಸ್ಫೋಟಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.

Share Post

Leave a Reply

Your email address will not be published. Required fields are marked *

error: Content is protected !!