ನ್ಯಾಯಾಂಗ ಸ್ವಾತಂತ್ರ್ಯ ಬಹಳ ಅಪಾಯದಲ್ಲಿದೆ….!

ಸುಪ್ರೀಂ ಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯಿ ತಮ್ಮ ಮೇಲೆ  ಬಂದಿರೋ ಲೈಂಗಿಕ ಕಿರುಕುಳ ಆರೋಪವನ್ನ ತಳ್ಳಿ ಹಾಕಿದ್ದಾರೆ. ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿರೋ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ ಪೀಠ, ವಿಶೇಷ ವಿಚಾರಣೆ ನಡೆಸಿತು.

ಇಂದು ನಡೆದ ಸ್ಪೆಷಲ್​​ ಹಿರಿಯರಿಂಗ್​ ವೇಳೆ ಸಿಜೆಐ ಗೊಗೋಯಿ ತಮ್ಮ ವಿರುದ್ಧದ ಆರೋಪಗಳನ್ನ ತಳ್ಳಿಹಾಕಿದ್ರು. ಈ ಆರೋಪಗಳಿಗೆ ಉತ್ತರ ಕೊಡಲು ನಾನು ಕೆಳಮಟ್ಟಕ್ಕೆ ಇಳಿಯಲಾರೆ. 20 ವರ್ಷದ ಸೇವೆಗೆ ಮುಖ್ಯನ್ಯಾಯಮೂರ್ತಿಗೆ ಸಿಕ್ಕಿದು ಇದೇನಾ ಎಂದು ಪ್ರಶ್ನಿಸಿದ್ರು.

 ನ್ಯಾಯಾಂಗ ಸ್ವಾತಂತ್ರ್ಯ ಬಹಳ ಅಪಾಯದಲ್ಲಿದೆ. ನ್ಯಾಯಾಂಗವನ್ನು ಅಸ್ಥಿರಗೊಳಿಸಲು ದೊಡ್ಡ ಪಿತೂರಿ ನಡೆದಿದೆ. ಈ ಮಹಿಳೆ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿರುವುದರ ಹಿಂದೆ ಯಾವುದೇ ಬಲವಾದ ಶಕ್ತಿಯೇ ಇದೆ ಎಂದು ರಂಜನ್ ಗೊಗೋಯಿ ಹೇಳಿದ್ರು.

Share Post

Leave a Reply

Your email address will not be published. Required fields are marked *

error: Content is protected !!