ಮೊದಲ ಹಂತದಲ್ಲಿ ಹಕ್ಕು ಚಲಾಯಿಸಿದ ಗಣ್ಯರು

ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕೇತಗಾನಹಳ್ಳಿ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತದಾನ ಮಾಡಿದರು. ಅವರ ಜೊತೆಗೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್‌ ಗೌಡ ಸಹ ತಮ್ಮ ಹಕ್ಕನ್ನು ಚಲಾಯಿಸಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಶ್ರೀ ಮತಚಲಾವಣೆ ಮಾಡಿದ್ರು. ರಾಜವಂಶಸ್ಥ ಯದುವೀರ್ ಒಡೆಯರ್  ಮೊದಲ ಬಾರಿಗೆ ತಮ್ಮ ‌ಪತ್ನಿ ತ್ರಿಷಿಕಾದೇವಿ ಒಡೆಯರ್ ಜೊತೆ ಬಂದು ಹಕ್ಕು ಚಲಾಯಿಸಿದ್ರು. ಕೃಷ್ಣರಾಜ ಕ್ಷೇತ್ರದ ಮತಗಟ್ಟೆ 179ರಲ್ಲಿ ಮತ  ಮೈಸೂರು ರಾಜವಂಶಸ್ಥರು ಮತ ಚಲಾಯಿಸಿದರು.

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿಎನ್ ಬಚ್ಚೇಗೌಡ, ಮೈಸೂರು ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮೈಸೂರಿನಲ್ಲಿ ರಾಮದಾಸ್, ಮಂಗಳೂರಿನ ಬಲ್ಮಠದಲ್ಲಿ ಮಿಥುನ್ ರೈ ಮತಚಲಾಯಿಸಿದರು.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್‌ ರೈ, ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಚಿವ ಕೃಷ್ಣ ಭೈರೇ ಗೌಡ, ನಟ ರಮೇಶ್‌ ಅರವಿಂದ್‌, ನಟ ಜಗ್ಗೇಶ್‌  ತಮ್ಮ ತಮ್ಮ ಕೇಂದ್ರಗಳಲ್ಲಿ ಮತದಾನ ಮಾಡಿದರು.

Share Post

Leave a Reply

Your email address will not be published. Required fields are marked *

error: Content is protected !!