ನೋಟ್ ಬ್ಯಾನ್ ಬಳಿಕ ಉದ್ಯೋಗ ಕಳೆದುಕೊಂಡ 50 ಲಕ್ಷ ಮಂದಿ..!

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ದೇಶದಲ್ಲಿ ಆದ ಬದಲಾವಣೆ ಏನು ಗೊತ್ತಾ..?
ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಬರೋಬ್ಬರಿ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಕಳವಳಕಾರಿ ಅಂಶ ಈಗ ಬಹಿರಂಗವಾಗಿದೆ.
ಅಜೀಮ್ ಪ್ರೇಮ್​ಜೀ ವಿಶ್ವವಿದ್ಯಾಲಯದ ಸೆಂಟರ್‌ ಫಾರ್‌ ಸಸ್ಟೈನೇಬಲ್‌ ಎಂಪ್ಲಾಯ್ಮೆಂಟ್‌  ಬಿಡುಗಡೆ ಮಾಡಿರುವ ‘ಸ್ಟೇಟ್‌ ಆಫ್‌ ವರ್ಕಿಂಗ್‌ ಇಂಡಿಯಾ 2019’ರ ವರದಿ ಪ್ರಕಾರ, 2016ರ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ತೀವ್ರ ಹೆಚ್ಚಳವಾಗಿದೆ.  ಕಳೆದ ಎರಡು ವರ್ಷಗಳಲ್ಲಿ 50 ಲಕ್ಷ ಪುರುಷರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ.
ವರದಿಯ ಪ್ರಕಾರ, 20-24 ವಯೋಮಾನದ ಯುವಸಮುದಾಯದ ಉದ್ಯೋಗಕ್ಕೇ ಅತಿ ಹೆಚ್ಚು ಕುತ್ತು ಬಂದಿದೆ. ನಗರ, ಗ್ರಾಮೀಣ ಎರಡೂ ಭಾಗದವರಿಗೂ ನಿರುದ್ಯೋಗದ ಬಿಸಿ ತಟ್ಟಿದೆ. 
ಉದ್ಯೋಗ ವಿಚಾರದಲ್ಲಿ ಮಹಿಳೆಯರಿಗೆ 2016ರ ನಂತರ ಅತೀ ಹೆಚ್ಚು ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.
Share Post

Leave a Reply

Your email address will not be published. Required fields are marked *

error: Content is protected !!