ಡಿಎಂಕೆ ನಾಯಕಿ ಕನ್ನಿಮೋಳಿಗೆ ಐಟಿ ಶಾಕ್

ಡಿಎಂಕೆ ನಾಯಕಿ ಹಾಗೂ ಟುಟಿಕೋರಿನ್​ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕನ್ನಿಮೋಳಿ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಕನ್ನಿಮೋಳಿ ನಿವಾಸದಲ್ಲಿ ಚುನಾವಣೆಗೆ ಹಂಚಲು ಹಣ ಬಚ್ಚಿಡಲಾಗಿದೆ ಅನ್ನೋ ಮಾಹಿತಿ ಮೇಲೆ ಸುಮಾರು 10 ಐಟಿ ಅಧಿಕಾರಿಗಳು ಏಕಕಾಲಕ್ಕೆ ಟುಟಿಕೋರಿನ್​ನಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

ಆದ್ರೆ ಕನ್ನಿಮೋಳಿ ನಿವಾಸದಲ್ಲಿ ಐಟಿ ಅಧಿಕಾರಿಗಳಿಗೆ ಸಂಶಯಾಸ್ಪದ ಹಣವಾಗಲಿ, ಇನ್ನೊಂದಾಗಲಿ ಸಿಕ್ಕಿಲ್ಲ ಎನ್ನಲಾಗಿದೆ. ಟುಟಿಕೋರಿನ್​ ಜಿಲ್ಲಾಧಿಕಾರಿಯೇ ಕನ್ನಿಮೊಳಿ ಮನೆಯಲ್ಲಿ ಹಣ ಬಚ್ಚಿಡಲಾಗಿದೆ ಎಂದು ದೂರು ನೀಡಿದ್ರು. ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಡಿಎಂಕೆ ಕಾರ್ಯಕರ್ತರು ಕನ್ನಿಮೋಳಿ ನಿವಾಸದ ಎದುರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!