ಅಭ್ಯರ್ಥಿ ಮನೆಯಲ್ಲಿ ಕುಣಿದ ಕುರುಡು ಕಾಂಚಾಣ – ವೆಲ್ಲೂರು ಲೋಕಸಭಾ ಚುನಾವಣೆ ಕ್ಯಾನ್ಸಲ್

ತಮಿಳುನಾಡಿನ ವೆಲ್ಲೂರು ಲೋಕಸಭೆ ಕ್ಷೇತ್ರದ ಚುನಾವಣೆ ಕ್ಯಾನ್ಸಲ್ ಆಗಿದೆ. ಡಿಎಂಕೆ ಪಕ್ಷದ ಅಭ್ಯರ್ಥಿ ಹಾಗೂ ದೊರೈ ಮುರುಗನ್ ಪುತ್ರ ಕಥೀರ್ ಆನಂದ್​ ನಿವಾಸದಲ್ಲಿ ₹11.5 ಕೋಟಿ ಹಣ ಸಿಕ್ಕ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಚುನಾವಣೆ ರದ್ದುಗೊಳಿಸಿದೆ.

ಮಾರ್ಚ್​​ 18 ರಂದು ನಡೆಯಲಿರುವ ಎರಡನೇ ಹಂತದಲ್ಲಿ ಚುನಾವಣೆಯಲ್ಲಿ ತಮಿಳುನಾಡಿನ ವೆಲ್ಲೂರು ಸೇರಿದಂತೆ 38 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಬೇಕಿತ್ತು. ಮತದಾರರಿಗೆ ಹಣ ನೀಡಲು ಮುಂದಾಗಿದ್ದಾರೆ ಎಂಬ ಆರೋಪದ ಮೇಲೆ ಚುನಾವಣೆ ರದ್ದಾಗಿದೆ. ತಮಿಳುನಾಡಿನ  ವಿವಿಧೆಡೆ ಚುನಾವಣಾ ಆಯೋಗ  ದಾಳಿ ನಡೆಸಿ ಬರೋಬ್ಬರಿ  ₹205 ಕೋಟಿ ನಗದು ಸುಮಾರು 250 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನ ವಶಪಡಿಸಿಕೊಂಡಿದೆ.

Share Post

Leave a Reply

Your email address will not be published. Required fields are marked *

error: Content is protected !!