ಎರಡು ವಾರ ಕಳೆದರು ಪತ್ತೆಯಾಗದ ಸ್ಟೆಲ್ಲಾಳ ಕತ್ತು ಕೊಯ್ದ ಹತ್ಯೆ ಪ್ರಕರಣದ ಹಂತಕರು

ಹುಬ್ಬಳ್ಳಿ: ಕಳೆದ 2 ವಾರಗಳ ಹಿಂದೆ ನಡೆದ ಹುಬ್ಬಳ್ಳಿಯ ಸ್ಟೆಲ್ಲಾ ಎಂಬ ಯುವತಿಯ ಕೊಲೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಧಾರವಾಡ ಪೊಲೀಸರು ವಿಫಲರಾಗಿದ್ದಾರೆ ಎಂದು ಕೊಲೆಯಾದ ಸ್ಟೆಲ್ಲಾ ನ ತಂದೆ ಹೇಳುತ್ತಿದ್ದಾರೆ. 2 ವಾರಗಳ ಹಿಂದೆ ಸ್ಟೆಲ್ಲಾಳನ್ನು ಕುಂದಗೋಳ ಕ್ರಾಸ ಬಳಿ ಕತ್ತನ್ನು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಅವಳ ಬಳಿ ಇದ್ದ 3 ಮೊಬೈಲ್ಗಳನ್ನು ಹಂತಕರು ತೆಗೆದುಕೊಂಡು ಹೋಗಿದ್ದಾರೆ..ಇದರ ಬಗ್ಗೆ ಯಾವೊಂದು ಸುಳಿವು ಕೂಡಾ ಪೊಲೀಸರಿಗೆ ಮಾಹಿತಿ ಲೆಕ್ಕವಿಲ್ಲ. ಹತ್ಯೆ ನಡೆದ ದಿನ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು ಆಕೆಯ 3 ಮೊಬೈಲಗಳ ಕಾಲ್ ಡಿಟೇಲ್ಸ್ ತರಿಸಿದ್ದರು. ಅಲ್ಲದೆ ಸಂದೇಹ ಬಂದ ಕೆಲವೊಂದು ನಂಬರಗಳ ಮೇಲೆ ನಿಗಾ ವಹಿಸಿದ್ದರು ಆದರೆ ಆ ನಂತರದಲ್ಲಿ ಮೋದಿ ಕಾರ್ಯಕ್ರಮ ಬಡೇ ಈಜತೆಮಾ ಮೊದಲಾದ ಕೆಲಸ ಕಾರ್ಯಗಳ ನಿಮಿತ್ತ ಇ ಪ್ರಕರಣದ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ ಎಂಬುದು ಇನ್ನೊಂದೆಡೆ ಆರೋಪ. ಒಂದು ಮೂಲದ ಪ್ರಕಾರ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ .ರಾಜಕೀಯ ಪ್ರಬಾವ ಇಲ್ಲದ ಸಾಮಾನ್ಯ ಕುಟುಂಬದ ಯುವತಿ ಸ್ಟೆಲ್ಲಾಳ ಹತ್ಯೆ ಇಡೀ ಹುಬ್ಬಳ್ಳಿಯನ್ನು ತಲ್ಲಣಗೊಳಿಸಿತ್ತು..
ಇನ್ನು ಮುಂದೆಯಾದರು ಹಂತಕರನ್ನು ಬೇಗನೆ ಬಂದಿಸುವದರ ಮೂಲಕ ಹಂತಕರನ್ನು ಹೆಡೆಮುರಿಗಟ್ಟುವಲ್ಲಿ ಧಾರವಾಡ ಪೊಲೀಸರು ಕಾರ್ಯಪ್ರವರ್ತರಾಗಬೇಕಿದೆ…

ವಿನಾಯಕ ಹಡಗಲಿ Thenews24

Share Post

Leave a Reply

Your email address will not be published. Required fields are marked *

error: Content is protected !!