ಕುಳಿತ ಜಾಗದಲ್ಲೇ ಪಾಕ್ ಗೆ ಶಾಕ್ ಕೊಟ್ಟ ಅಂಶುಲ್ ಸಕ್ಸೆನಾ. ಈತನ ಕೆಲಸಕ್ಕೆ ದೇಶವೇ ಬಹುಪರಾಕ್. ಯಾರಿವನು ? ಇವನು ಮಾಡಿದ್ದೇನು ?

ಅಂಶುಲ್ ಸಕ್ಸೆನಾ ಈ ಹೆಸರು ಈಗ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಏಕೆಂದರೆ ಪುಲ್ವಾಮ ದುರಂತದ ನಂತರ ಇಡೀ ದೇಶವೇ ಅಲ್ಲಿ ಹುತಾತ್ಮರಾದ ಯೋಧರಿಗಾಗಿ ಕಣ್ಣೀರು ಸುರಿಸುತ್ತಿದ್ದರೆ, ದೇಶದೊಳಗೆ ಇರುವ ಕೆಲವು ದೇಶದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ಉಗ್ರರ ಪರವಾಗಿ ಮಾತನಾಡುವ ಮೂಲಕ ಜನರ ಭಾವನೆಗಳಿಗೆ ಕೊಳ್ಳಿಯಿಡುವ ಕೆಲಸವನ್ನು ಮಾಡಿದ್ದಾರೆ. ಪಾಕಿಸ್ತಾನದ ಪರ ಮಾತನಾಡಿದ ಕೆಲವರಿಗೆ ಅಂಶುಲ್ ಸಕ್ಸೆನಾ ಸರಿಯಾದ ಪಾಠ ಕಲಿಸಿ, ಆತನ ತಂತ್ರಕ್ಕೆ ಪಾಕಿಸ್ತಾನ ಕೂಡಾ ಈಗ ಆಲೋಚಿಸುವಂತೆ ಆಗಿದೆ.
ಪಾಕ್ ವಿರುದ್ಧ ಅಂಶುಲ್ ಬಹಳ ನಿಶ್ಯಬ್ದವಾಗಿ ಸೈಬರ್ ಧಾಳಿಯನ್ನು ನಡೆಸಿದ್ದಾನೆ. ಈತ ಗುರುವಾರದಿಂದಲೇ ತನ್ನ ಕಾರ್ಯವನ್ನು ಆರಂಭಿಸಿದ್ದಾನೆ. ಈತ ಮಾಡಿರುವ ಕಾರ್ಯ ಏನೆಂದರೆ ಪಾಕಿಸ್ತಾನದ ಕೆಲವು ಮುಖ್ಯ ಸರಕಾರಿ ವೆಬ್ಸೈಟ್ ಗಳನ್ನು ಹ್ಯಾಕ್ ಮಾಡಿರುವುದು. ಎಥಿಕಲ್ ಹ್ಯಾಕರ್ ಆಗಿರುವ ಈತ ತಾನು ಹ್ಯಾಕ್ ಮಾಡಿರುವ ವಿಚಾರದ ಕುರಿತು ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಹಾಕಿದ್ದಾನೆ. ಸೈನಿಕರಂತೆ ನನಗೆ ಯುದ್ಧಭೂಮಿಯಲ್ಲಿ ಹೋರಾಡುವುದು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಈ ಚಿಕ್ಕ ಪ್ರಯತ್ನ ಎಂದಿರುವ ಆತ , ಸೈನಿಕರ ಹತ್ಯೆಗೆ ಕಾರಣವಾದ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕಿದೆ. ಇದು ಕೇವಲ ಆರಂಭವಷ್ಟೆ ಎಂದು ಹೇಳಿದ್ದಾನೆ.
ಈತನನ್ನು ಜನರು ಈಗ ಸಾಮಾಜಿಕ ಜಾಲತಾಣಗಳ ಯೋಧ ಎಂದು ಕರೆದಿದ್ದಾರೆ. ಪುಲ್ವಾಮ ದುರಂತದ ನಂತರ ಪಾಕಿಸ್ತಾನದ ಪರವಾಗಿ, ಉಗ್ರರ ಪರವಾಗಿ ಪೋಸ್ಟ್ ಮಾಡಿದ್ದ, ಸ್ಟೇಟಸ್ ಹಾಕಿದ್ದ ಒಬ್ಬೊಬ್ಬರ ಬಗ್ಗೆಯೂ ಈತ ಮಾಹಿತಿಯನ್ನು ಹುಡುಕಿ ಸರಿಯಾದ ಗುಣಪಾಠ ನೀಡುತ್ತಿದ್ದಾನೆ. ಈತನ ಪರಿಶ್ರಮದಿಂದ ದೇಶದಲ್ಲೇ ಇದ್ದು ದೇಶದ್ರೋಹಿ ಮಾತನಾಡಿನ ಹಲವರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತೆ ಕೆಲವು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರ ಹಾಕಲಾಗಿದೆ. ಅಂಶುಲ್ ಇಂತ ದ್ರೋಹಿಗಳನ್ನು ಯಾರೊಬ್ಬರನ್ನೂ ಬಿಡುವುದಿಲ್ಲ ಎಂದು ಹೇಳಿದ್ದು, ಅವರ ಕಾರ್ಯಕ್ಕೆ ಬಹಳಷ್ಟು ಶ್ಲಾಘನೆ ದೊರೆತಿದೆ.
Share Post

Leave a Reply

Your email address will not be published. Required fields are marked *

error: Content is protected !!